ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಗಾಯತ್ರಿ ಮಂತ್ರ ಪಠಿಸಿದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಕಾಮೆಂಟ್ಗಳ ಸುರಿಮಳೆಗೈದಿದ್ದಾರೆ. ‘ಮಾಲ್ತಿಯ ಧ್ವನಿ ಪಾಪ್ಸ್ಟಾರ್ ರೀತಿ ಇದೆ, ತುಂಬಾ ಸುಂದರವಾಗಿದೆ. ಆಕೆ ಗಾಯಕಿ ಆಗುವುದರಲ್ಲಿ ಸಂದೇಹವಿಲ್ಲ’ ಎಂದು ನೆಟ್ಟಿಗರು ಪ್ರೀತಿಯಿಂದ ಹೊಗಳಿದ್ದಾರೆ. ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಸಿನಿಮಾ ಕೆಲಸಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ, ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಜೊತೆ ಸಮಯ ಕಳೆಯುವುದನ್ನು ಎಂದಿಗೂ ಮರೆಯುವುದಿಲ್ಲ. ಶೂಟಿಂಗ್ ಸೆಟ್ಗಳಿಗೂ ಮಗಳನ್ನು ಕರೆದೊಯ್ಯುವ ಪ್ರಿಯಾಂಕಾ, ಇದೀಗ ಮಗಳ ಮುದ್ದಾದ ಕ್ಷಣಗಳ ಫೋಟೋ ಮತ್ತು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.