ಉದ್ಯೋಗಿಗಳ ಭವಿಷ್ಯ ನಿಧಿ (EPF) ನಿಯಮಗಳನ್ನು ಮತ್ತಷ್ಟು ಸರಳೀಕರಿಸಲಾಗಿದೆ. ನಿವೃತ್ತಿ ನಂತರ ಒಟ್ಟಿಗೆ ಇಪಿಎಫ್ ಹಣ ಪಡೆಯಬಹುದು. ಇಲ್ಲದಿದ್ದರೆ ಎಸ್ಡಬ್ಲ್ಯುಪಿ ಪ್ಲಾನ್ನಂತೆ ಹಂತ ಹಂತವಾಗಿ ಹಿಂಪಡೆಯಬಹುದು. 55 ವರ್ಷ ವಯಸ್ಸಿಗಿಂತ ಮುಂಚೆಯೇ ಶೇ. 90ರಷ್ಟು ಹಣ ಹಿಂಪಡೆಯಬಹುದು. ಜೊತೆಗೆ ನಿರುದ್ಯೋಗ ಅವಧಿಯಲ್ಲಿ ಹಣ ಹಿಂಪಡೆಯಲು ಇದ್ದ ಕಾಯುವಿಕೆಯ ಅವಧಿಯನ್ನು 2 ತಿಂಗಳಿಗೆ ಇಳಿಸಲಾಗಿದೆ. ನವದೆಹಲಿ, ನವೆಂಬರ್ 19: ಉದ್ಯೋಗಿಗಳ ಭವಿಷ್ಯ ನಿಧಿ (EPF) ಹಣವನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭ ಮತ್ತು ಗ್ರಾಹಕಸ್ನೇಹಿಯಾಗಿಸಲು ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ತರಲಾಗಿದೆ. ಹೊಸ ಸರಳೀಕೃತ ನಿಯಮಗಳ ಪ್ರಕಾರ, 55 ವರ್ಷಕ್ಕಿಂತ ಕಡಿಮೆ ವಯಸ್ಸಿನ ಇಪಿಎಫ್ ಸದಸ್ಯರು ತಮ್ಮ ಭವಿಷ್ಯ ನಿಧಿಯಲ್ಲಿರುವ ಒಟ್ಟು ಮೊತ್ತದ ಶೇ.