ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಂದ ಹಿಡಿದು ಆಧುನಿಕ ಮಲ್ಟಿಪ್ಲೆಕ್ಸ್ಗಳವರೆಗೆ ಪ್ರತಿಯೊಂದು ಸಿನಿಮಾ ಥಿಯೇಟರ್ಗಳಲ್ಲಿನ ಸೀಟ್ಗಳು ಕೆಂಪು ಬಣ್ಣದಲ್ಲಿಯೇ ಇರುತ್ತವೆ. ಕಪ್ಪು, ಕಂದು, ನೀಲಿಯಂತಹ ಇತರ ಬಣ್ಣಗಳು ಲಭ್ಯವಿದ್ದರೂ ಕೆಂಪು ಬಣ್ಣದ ಸೀಟ್ಗಳನ್ನೇ ಏಕೆ ಆಯ್ಕೆ ಮಾಡಲಾಗುತ್ತದೆ ಗೊತ್ತಾ? ಇದರ ಹಿಂದಿರುವ ವೈಜ್ಞಾನಿಕ ಕಾರಣವಾದರೂ ಏನು ಎಂಬುದನ್ನು ತಿಳಿದುಕೊಳ್ಳಿ. ಯಾವುದೇ ಹೊಸ ಚಿತ್ರ ಬಿಡುಗಡೆಯಾದರೂ ಸಿನಿ ಪ್ರೇಮಿಗಳು ಥಿಯೇಟರ್ಗೆ (theater) ಹೋಗಿಯೇ ಸಿನಿಮಾವನ್ನು ನೋಡುತ್ತಾರೆ. ಚಿತ್ರಮಂದಿರಗಳಿಗೆ ಹೋಗಿ ಸಿನಿಮಾಗಳನ್ನು ನೋಡುವುದೇ ಒಂದು ಅದ್ಭುತ ಅನುಭವ. ಈ ಅದ್ಭುತ ಅನುಭವವನ್ನು ಪಡೆಯಲು ಕೂಡ ಆಗಾಗ್ಗೆ ಥಿಯೇಟರ್ಗಳಿಗೆ ಹೋಗಿ ಫಿಲ್ಮ್ ನೋಡುತ್ತೀರು ಅಲ್ವಾ.