ಕೊರ್ಲಕುಂಟೆ ತಿಪ್ಪೇಸ್ವಾಮಿ, ಚಳ್ಳಕೆರೆಬರಗಾಲದಲ್ಲಿ ದನ, ಕರುಗಳನ್ನು ಉಳಿಸಿಕೊಳ್ಳಲು ಗೋ ಶಾಲೆಗಳನ್ನು ಆರಂಭಿಸಬೇಕು ಎನ್ನುವ ರೈತ ಸಂಘಟನೆಗಳ ಹೋರಾಟಕ್ಕೆ ಎಚ್ಚೆತ್ತು, ಕಂದಾಯ ಇಲಾಖೆ ಗೋ ಶಾಲೆಗಳ ತ. ಆದರೆ, ಯೋಜನೆ ಸಿದ್ಧತೆಯಲ್ಲೇ ಉಳಿದಿರುವುದು ಗೋ ಪಾಲಕರ ಕೆಂಗಣ್ಣಿಗೆ ಗುರಿಯಾಗಿದೆ. ಈ ಹಿಂದೆ ಈ ಕುರಿತು ರೈತರು ಹೋರಾಟ ನಡೆಸಿ, ಗೋಶಾಲೆ ಆರಂಭಿಸದಿದ್ದರೆ ದನಕರುಗಳನ್ನು ಕಚೇರಿಯೊಳಗೆ ತಂದು ಕಟ್ಟುತ್ತೇವೆ ಎಂದು ಎಚ್ಚರಿಸಿದ್ದರು. ರೈತರ ಹೋರಾಟದ ಸಂದರ್ಭಕ್ಕೆ ಅಧಿಕಾರಿಗಳು ಇನ್ನೇನು ಸರ್ಕಾರಕ್ಕೆಪ್ರಸ್ತಾವನೆ ಕಳುಹಿಸಿದ್ದೇವೆ. ವರದಿ ಬಂದ ಕೂಡಲೇ ಆರಂಭ ಮಾಡುತ್ತೇವೆ ಎಂದಿದ್ದರು. ಆದರೆ, ಯಾವಾಗ ಕೇಳಿದರೂ ಸಿದ್ಧತೆ ನಡೆಸುತ್ತಿದ್ದೇವೆ ಎನ್ನುತ್ತಲೇ ಕಾಲಹರಣ ಮಾಡುತ್ತಿದ್ದಾರೆ ಅಧಿಕಾರಿಗಳು. ಬುಧವಾರ ಅನೇಕ ತಾಲೂಕುಗಳಲ್ಲಿ ಗೋಶಾಲೆ ಆರಂಭಕ್ಕೆ ಚಾಲನೆ ಸಿಕ್ಕಿದೆ.