ನಟನೆ ಹಾಗೂ ಸೌಂದರ್ಯದ ಮೂಲಕವೇ ಭಾರತದಾದ್ಯಂತ ಅಭಿಮಾನಿ ಬಳಗ ಹೊಂದಿರುವ ನಟಿ ಮೃಣಾಲ್ ಠಾಕೂರ್, ಇದೀಗ ಹೊಸ ಫೋಟೋಶೂಟ್ ಮತ್ತು ಬಾಡಿ ಪಾಸಿಟಿವಿಟಿ ಕುರಿತಾದ ಮಾತುಗಳಿಂದ ಸುದ್ದಿಯಲ್ಲಿದ್ದಾರೆ. ಇತ್ತೀ. .ತನಗೆ ತನ್ನ ದೇಹಾಕೃತಿಯ ಬಗ್ಗೆ ಅಪಾರ ಪ್ರೀತಿ ಇದೆ ಎಂದಿರುವ ಮೃಣಾಲ್, ಪ್ರತಿಯೊಬ್ಬರೂ ತಮ್ಮ ದೇಹ ಮತ್ತು ಚರ್ಮದ ಬಣ್ಣದ ಬಗ್ಗೆ ಕೀಳರಿಮೆ ಬಿಟ್ಟು ಆರಾಮವಾಗಿ ಹಾಗೂ ಆತ್ಮವಿಶ್ವಾಸದಿಂದ ಇರಬೇಕು ಎಂಬ ಸಂದೇಶ ನೀಡಿದ್ದಾರೆ..ಹೊಸ ಫೋಟೋಶೂಟ್ನಲ್ಲಿ ಮೃಣಾಲ್ ಅವರು ಕಪ್ಪು ಬಣ್ಣದ ಸ್ಲೀವ್ಲೆಸ್ ಟಾಪ್ ಹಾಗೂ ಪ್ರತಿಯೊಂದು ಪೋಸ್ಗೂ ನೃತ್ಯ ಮಾಡುವಂತೆ ಚಲಿಸುವ ಉದ್ದನೆಯ ಟೈರ್ಡ್ ಫ್ರಿಂಜ್ ಸ್ಕರ್ಟ್ ಧರಿಸಿ ಮಿಂಚಿದ್ದಾರೆ..