ನವದೆಹಲಿ: ಮದುವೆ ನಿಶ್ಚಯವಾಗಿತ್ತು, ದಿನಾಂಕವೂ ಫಿಕ್ಸ್ ಆಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ ಎನ್ನುವಷ್ಟರಲ್ಲಿ ವಧುವಿನ ಉದ್ಯೋಗದ ವಿಚಾರವೊಂದು ಮದುವೆಯನ್ನೇ ಮುರಿದುಬಿಟ್ಟಿದೆ. ರಾಜ್ಯ. ರಾಜ್ಯ ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದ ಯುವತಿಯ ಉದ್ಯೋಗ ತಾತ್ಕಾಲಿಕ ಎಂಬ ಸತ್ಯ ತಿಳಿಯುತ್ತಿದ್ದಂತೆ ವರನ ಕಡೆಯವರು ನಿಶ್ಚಿತಾರ್ಥವನ್ನೇ ರದ್ದುಗೊಳಿಸಿದ್ದಾರೆ. ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.ಮದುವೆಗಾಗಿ ಮ್ಯಾಟ್ರಿಮೋನಿ ಆ್ಯಪ್ನಲ್ಲಿ ಹುಡುಕಾಟ ನಡೆಸುತ್ತಿದ್ದ ಯುವಕನಿಗೆ ಬಿಎಸ್ಸಿ ಪದವಿ ಪಡೆದಿದ್ದ ಯುವತಿಯ ಪರಿಚಯವಾಗಿತ್ತು. ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಆಕೆ ರಾಜ್ಯ ಸರ್ಕಾರದ ಇಲಾಖೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಈ ಪ್ರಮುಖ ವಿಚಾರವನ್ನು ಮ್ಯಾಟ್ರಿಮೋನಿ ಪ್ರೊಫೈಲ್ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರಲಿಲ್ಲ ಎನ್ನಲಾಗಿದೆ.ಮಾತುಕತೆ ವೇಳೆ ಯುವತಿ ವರನ ಸಂಬಳದ ಬಗ್ಗೆ ವಿಚಾರಿಸಿದ್ದಾಳೆ.