ಪಂಜಾಬ್ ಸಿಎಂ ಭಗವಂತ್ ಮಾನ್ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ 3 ತಾಸು ಏರ್ಪೋರ್ಟ್ ಅಥಾರಿಟಿಯ ವಶದಲ್ಲಿಡಲಾಗಿತ್ತು ಎಂದು ಆಪ್ ಆರೋಪಿಸಿದೆ. ಚಂಡೀಗಢ (ಪಂಜಾಬ್): ಪ್ಯಾರಿಸ್ ಪ್ರವಾಸ ಮುಗಿಸಿ ಸೋಮವಾರ (ಅಕ್ಟೋಬರ್ 19) ತಡರಾತ್ರಿ ದೆಹಲಿ ವಿಮಾನ ನಿಲ್ದಾಣಕ್ಕೆ ಮರಳಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಸುಮಾರು ಮೂರು ಗಂಟೆಗಳ ಕಾಲ ಏರ್ಪೋರ್ಟ್ ಅಥಾರಿಟಿ ವಶದಲ್ಲಿಡಲಾಗಿತ್ತು ಎಂದು ಆಮ್ ಆದ್ಮಿ ಪಕ್ಷ (AAP) ಗಂಭೀರ ಆರೋಪ ಮಾಡಿದೆ.ಅಲ್ಲದೆ, ಮುಖ್ಯಮಂತ್ರಿಗೆ 50 ಸಾವಿರ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಮಾನ್ ಅವರ ವಿದೇಶಿ ಪ್ರವಾಸಗಳಿಗೆ ರಾಜಕೀಯ ಅನುಮತಿ ನೀಡಲು ಪದೆ ಪದೇ ನಿರಾಕರಿಸುತ್ತಿದೆ ಎಂದು ಪಕ್ಷವು ಆರೋಪಿಸಿದೆ.