Karnataka rice price Today: ಅಕ್ಕಿ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಹೊಸ ಸೋನಾ ಮಸೂರಿ ಅಕ್ಕಿಯ ದರ ಕೆಜಿಗೆ ₹10ರಿಂದ ₹20ರವರೆಗೆ ಇಳಿಕೆಯಾಗಿದ್ದು, ಸದ್ಯ ₹65ರಿಂದ ₹70ಕ್ಕೆ ಮಾರಾಟವಾಗುತ್ತಿದೆ. ಭತ್ತದ ಪೂರೈಕೆ ಹೆಚ್ಚಾದ ಹಿನ್ನೆಲೆಯಲ್ಲಿ ಕ್ವಿಂಟಲ್ ಅಕ್ಕಿಗೆ ₹2,000 ದರ ಕಡಿಮೆಯಾಗಿದೆ. ರಾಯಚೂರು, ನವೆಂಬರ್ 19: ಅಕ್ಕಿ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಇದೀಗ ಕೊಂಚ ನಿರಾಳತೆ ಸಿಕ್ಕಿದೆ. ಮಾರುಕಟ್ಟೆಯಲ್ಲಿ ಹೊಸ ಸೋನಾ ಮಸೂರಿ ಅಕ್ಕಿಯ ದರದಲ್ಲಿ ಭಾರೀ ಇಳಿಕೆಯಾಗಿದೆ. ಈ ಹಿಂದೆ ಕೆಜಿಗೆ ₹80ರಿಂದ ₹90ರ ವರೆಗೆ ಮಾರಾಟವಾಗುತ್ತಿದ್ದ ಅಕ್ಕಿ ಬೆಲೆ ಇದೀಗ ₹65ರಿಂದ ₹70ಕ್ಕೆ ಇಳಿಕೆಯಾಗಿದೆ.