ಯುಪಿಐ ಬಳಕೆದಾರರಿಗೆ ಸಂತಸದ ಸುದ್ದಿ. ಆಯ್ದ ಯುಪಿಐ ವಹಿವಾಟುಗಳಿಗೆ ವಿಧಿಸಬೇಕಿದ್ದ ಶುಲ್ಕ ಜಾರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ. 2027ರ ವಿಧಾನಸಭಾ ಚುನಾವಣೆಗಳ ಬಳಿಕವಷ್ಟೇ ಈ ಶುಲ್ಕ ಜಾರಿಗೆ ಬರಬಹುದು ಎನ್ನಲಾಗಿದೆ. ಸಣ್ಣ ವ್ಯಾಪಾರಿಗಳು, ವೈಯಕ್ತಿಕ ವಹಿವಾಟುಗಳು ಹಾಗೂ ₹2000ದವರೆಗಿನ ಅಂಗಡಿ ಪಾವತಿಗಳಿಗೆ ಶುಲ್ಕ ಅನ್ವಯಿಸುವುದಿಲ್ಲ. ಗ್ರಾಹಕರಿಗೆ ನೇರವಾಗಿ ಯಾವುದೇ ಶುಲ್ಕದ ಹೊರೆ ಇರುವುದಿಲ್ಲ. ನವದೆಹಲಿ, ನವೆಂಬರ್ 19: ಗೂಗಲ್ ಪೇ, ಫೋನ್ಪೇ, ಪೇಟಿಎಂ ಸೇರಿದಂತೆ ಯುಪಿಐ ಮೂಲಕ ಹಣ ಪಾವತಿಸುವವರಿಗೆ ಮಹತ್ವದ ಸುದ್ದಿ ಕೇಳಿಬಂದಿದೆ. ಆಯ್ದ ಯುಪಿಐ ವಹಿವಾಟುಗಳ ಮೇಲೆ ವ್ಯಾಪಾರಿ ರಿಯಾಯಿತಿ ದರ ವಿಧಿಸುವ ಪ್ರಸ್ತಾವನೆಯ ಜಾರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ.