ರಣಬೀರ್ ಕಪೂರ್ ಮತ್ತು ಯಶ್ ನಟನೆಯ ರಾಮಾಯಣ ಭಾಗ 1 ಸಿನಿಮಾ ವಿಶ್ವದಾದ್ಯಂತ 1500 ಕೋಟಿ ರೂಪಾಯಿ ಕಲೆಕ್ಷನ್ ದಾಟಿದೆ. 14ನೇ ದಿನದಂದು 1519.05 ಕೋಟಿ ಗ್ರಾಸ್ ತಲುಪಿರುವ ಚಿತ್ರ ಈಗ 2000 ಕೋಟಿ ಗುರಿಯತ್ತ ಸಾಗಿದೆ. ದಕ್ಷಿಣದಲ್ಲಿ ಸ್ವಲ್ಪ ಕುಸಿತ ಕಂಡರೂ ಹಿಂದಿ ಮತ್ತು ವಿದೇಶದಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ರಣಬೀರ್ ಕಪೂರ್ ಮತ್ತು ಯಶ್ ನಟನೆಯ 'ರಾಮಾಯಣ’ ಸಿನಿಮಾ ವಿಶ್ವದಾದ್ಯಂತ 1500 ಕೋಟಿ ಮೈಲಿಗಲ್ಲು ದಾಟಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾ ಹಿಂದಿಯಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಆದರೆ ದಕ್ಷಿಣ ಭಾರತದಲ್ಲಿ ವೇಗ ಸ್ವಲ್ಪ ತಗ್ಗಿದೆ. ಈಗ ಎಲ್ಲರ ಚಿತ್ತ 2000 ಕೋಟಿ ರೂಪಾಯಿ ಗಡಿಯ ಮೇಲಿದೆ.