Karnataka Government: ರಾಜ್ಯದಲ್ಲಿ ಹೊಸ ‘ಪ್ರಜಾಸೇವಾ ಆಯುಕ್ತಾಲಯ’ ಸ್ಥಾಪನೆಗೆ ಸರ್ಕಾರದ ಆದೇಶ; ಏನಿದು ಹೊಸ ವ್ಯವಸ್ಥೆ? The Karnataka government has ordered the establishment of a new Praja Seva Commissionerate under the Praja Seva Department to improve public service delivery and ensure faster grievance redressal. ಬೆಂಗಳೂರು: ರಾಜ್ಯದಲ್ಲಿ ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳನ್ನು ತ್ವರಿತವಾಗಿ ತಲುಪಿಸುವುದು ಹಾಗೂ ಜನರ ದೂರುಗಳನ್ನು ಕಾಲಮಿತಿಯೊಳಗೆ ಪರಿಹರಿಸುವ ಉದ್ದೇಶದಿಂದ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಜಾಸೇವಾ ಇಲಾಖೆಯ ಅಡಿಯಲ್ಲಿ ಹೊಸದಾಗಿ ಪ್ರಜಾಸೇವಾ ಆಯುಕ್ತಾಲಯ ಸ್ಥಾಪನೆಗೆ ಆದೇಶ ಹೊರಡಿಸಲಾಗಿದ್ದು, ಆಯುಕ್ತರು ಮತ್ತು ವಿಶೇಷ ಆಯುಕ್ತರ ಹುದ್ದೆಗಳನ್ನೂ ಸೃಜಿಸಲಾಗಿದೆ.