ನವದೆಹಲಿ: ಇಂದಿನ ಕಾಲದಲ್ಲಿ ಯುದ್ಧ ಗೆಲ್ಲಲು ಕೇವಲ ಕೋಟ್ಯಂತರ ರೂಪಾಯಿ ಬೆಲೆಯ ದೊಡ್ಡ ದೊಡ್ಡ ಮಿಸೈಲ್ ಮತ್ತು ಟ್ಯಾಂಕರ್ಗಳಿದ್ದರೆ ಸಾಲದು ಬದಲಾಗಿ, ಕೃತಕ ಬುದ್ಧಿಮತ್ತೆ, ಕ್ಷಣಾರ್ಧದಲ್ಲಿ ನಿರ್ಧಾ. ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಆಧುನಿಕ ಯುದ್ಧ ತಂತ್ರಗಳು ಹೇಗೆ ಬದಲಾಗುತ್ತಿವೆ ಎಂಬುದನ್ನು ಅಮೆರಿಕ-ಇರಾನ್ ಸಂಘರ್ಷದ ಉದಾಹರಣೆಯೊಂದಿಗೆ ವಿವರಿಸಿದ್ದಾರೆ. .ಒಂದೇ ದಿನದಲ್ಲಿ 1,000 ಗುರಿಗಳ ಮೇಲೆ ದಾಳಿ!ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧವನ್ನು ಉಲ್ಲೇಖಿಸಿದ ಜನರಲ್ ಸುಬ್ರಮಣಿ, ಅಮೆರಿಕವು AI ತಂತ್ರಜ್ಞಾನವನ್ನು ಬಳಸಿಕೊಂಡು ಯುದ್ಧದ ಮೊದಲ ದಿನವೇ ಬರೋಬ್ಬರಿ 1,000 ಗುರಿಗಳ ಮೇಲೆ ದಾಳಿ ನಡೆಸಿತು. ಆದರೆ ದುರದೃಷ್ಟವಶಾತ್ ಒಂದು ದಾಳಿ ತಪ್ಪಿ ಶಾಲೆಯ ಮೇಲೆ ಬಿದ್ದಿದ್ದರಿಂದ ಮಕ್ಕಳು ಪ್ರಾಣ ಕಳೆದುಕೊಂಡರು.