ವಾರಣಾಸಿ: ಉತ್ತರ ಪ್ರದೇಶದಿಂದ ಪಶ್ಚಿಮ ಬಂಗಾಳಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 7 ಲಕ್ಷ ರೂಪಾಯಿ ಮೌಲ್ಯದ 23 ಅಪರೂಪದ ‘ಇಂಡಿಯನ್ ಸಾಫ್ಟ್ಶೆಲ್’ ಜಾತಿಯ ಜೀವಂತ ಆಮೆಗಳನ್ನು ವಾರಣಾಸಿಯ. 18) ನಿಲ್ದಾಣದ ಎರಡನೇ ಪ್ರವೇಶ ದ್ವಾರದ ಬಳಿಯಿರುವ ನಂದಿ ಪಾರ್ಕ್ ಸಮೀಪ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ಮಹಿಳೆಯರನ್ನು ತಡೆದು ಪರಿಶೀಲಿಸಿದಾಗ ಈ ಕಳ್ಳಸಾಗಣೆ ಜಾಲ ಬಯಲಾಗಿದೆ..ಬಂಧಿತ ಮಹಿಳೆಯರು ಯಾರು?ಪೊಲೀಸರ ಬಲೆಗೆ ಬಿದ್ದ ಆರೋಪಿಗಳನ್ನು ಉತ್ತರ ಪ್ರದೇಶದ ಸುಲ್ತಾನ್ಪುರ ಜಿಲ್ಲೆಯ ಪಾಕ್ರಿ ಭಾದರ್ ಗ್ರಾಮದ ನಿವಾಸಿಗಳಾದ 25 ವರ್ಷದ ಮನೀಷಾ ಮತ್ತು 28 ವರ್ಷದ ಸಪ್ನಾ ಎಂದು ಗುರುತಿಸಲಾಗಿದೆ.