ದೊಡ್ಡ ಕಂಪನಿಯೊಂದರಲ್ಲಿ ವರ್ಷದ ಹಿಂದೆ ಕೆಲಸಕ್ಕೆ ಸೇರಿದ ಯುವಕನೊಬ್ಬ ತನಗೆ ಬಿಟ್ಟಿ ಸಂಬಳ ಬರುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾನೆ. ಕೆಲಸ ಸೇರಿದ ಹೊಸದರಲ್ಲೇ ಮ್ಯಾನೇಜರ್ ಕೆಲಸ ಕಳೆದುಕೊಂಡರು. ಮತ್ಯಾವ ಮ್ಯಾನೇಜರ್ ಅಸೈನ್ ಆಗಿಲ್ಲ. ಆಫೀಸಲ್ಲಿ ಹೇಳೋರಿಲ್ಲ ಕೇಳೋರಿಲ್ಲ. ಎಚ್ಆರ್ಗೆ ತಿಳಿಸಿದ್ರೆ ಕೆಲಸ ಹೋಗುತ್ತೆ ಅನ್ನೋ ಭಯ. ಏನು ಮಾಡ್ಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಈತ ಕೇಳುತ್ತಿದ್ದಾನೆ. ಐಟಿ ಕಂಪನಿಗಳಲ್ಲಿ ಬೆಂಚ್ ಸಿಟ್ಟರ್ಸ್ ಇರ್ತಾರೆ, ಇವರಿಗೆ ಯಾವ ಪ್ರಾಜೆಕ್ಟ್ ಕೂಡ ಅಸೈನ್ ಆಗಿರೋದಿಲ್ಲ. ಅವರು ಬೆಂಚ್ ಸಿಟ್ಟರ್ಸ್ ಎಂಬುದು ಮ್ಯಾನೇಜರ್ನಿಂದ ಹಿಡಿದು ಎಚ್ಆರ್ವರೆಗೆ ಎಲ್ಲರಿಗೂ ಗೊತ್ತಿರುತ್ತದೆ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಉದ್ಯೋಗಿಯೊಬ್ಬರು ವಿಚಿತ್ರ ಅನುಭವ ಹಂಚಿಕೊಂಡಿದ್ದಾರೆ.