ಗಾನವಿ ಅವರು ಬಿಗ್ ಬಾಸ್ ಮನೆಯಲ್ಲಿ ಬಹುತೇಕ ಎಲ್ಲರ ಜೊತೆಗೂ ಜಗಳ ಮಾಡಿಕೊಂಡಿದ್ದಾರೆ. ಈಗ ಸೌಂದರ್ಯಾ ಶೆಟ್ಟಿ ಮೇಲೆ ಅವರು ತಿರುಗಿ ಬಿದ್ದಿದ್ದಾರೆ. ಮಾತಿನ ಭರದಲ್ಲಿ ವೈಯಕ್ತಿಕ ವಿಷಯಗಳನ್ನು ಎಳೆದು ತರಲಾಗಿದೆ. ಇದರಿಂದಾಗಿ ಗಾನವಿ ಅವರು ಸೌಂದರ್ಯಾ ಶೆಟ್ಟಿ ಮೇಲೆ ಉಗ್ರ ಸ್ವರೂಪ ತಾಳಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಈಗ ಉಳಿದುಕೊಂಡಿರುವುದು ಮೂವರು ಮಹಿಳಾ ಸ್ಪರ್ಧಿಗಳು ಮಾತ್ರ. ಆಸಿಯಾ, ಸೌಂದರ್ಯಾ ಶೆಟ್ಟಿ ಮತ್ತು ಗಾನವಿ ಅವರು ಉಳಿದುಕೊಂಡಿದ್ದಾರೆ. ಈ ಮೂವರ ನಡುವೆ ಭಾರಿ ಪೈಪೋಟಿ ಇದೆ. ಟಾಸ್ಕ್ ನಡುವೆ ದೊಡ್ಡ ದೊಡ್ಡ ಜಗಳ ಆಗುತ್ತಿದೆ.