ಚಳಿಗಾಲದಲ್ಲಿ ನಿಮ್ಮ ಸ್ಮಾರ್ಟ್ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಕೆಲವೊಮ್ಮೆ ಶೇ 20-30ರಷ್ಟು ಚಾರ್ಜ್ ಇದ್ದರೂ ಫೋನ್ ಇದ್ದಕ್ಕಿದ್ದಂತೆ ಸ್ವಿಚ್ ಆಫ್ ಆಗಬಹುದು. ಕಡಿಮೆ ತಾಪಮಾನದಿಂದ ಲಿಥಿಯಂ-ಐಯಾನ್ ಬ್ಯಾಟರಿಯ ಕಾರ್ಯಕ್ಷಮತೆ ಹೇಗೆ ಬದಲಾಗುತ್ತದೆ? ಫೋನ್ ಅನ್ನು ಬೆಚ್ಚಗೆ ಇಡುವುದು, ಚಾರ್ಜಿಂಗ್ ವೇಳೆ ಎಚ್ಚರಿಕೆ ವಹಿಸುವುದು ಹೇಗೆ? ಚಳಿಗಾಲ (Winter) ಆರಂಭವಾಗುತ್ತಿದ್ದಂತೆ ಬಿಸಿಲಿನ ತಾಪದಿಂದ ಕೊಂಚ ನೆಮ್ಮದಿ ಸಿಗುತ್ತದೆ. ಆದರೆ ಇದೇ ಸಂದರ್ಭದಲ್ಲಿ ಹಲವು ವಸ್ತುಗಳ ಕಾರ್ಯನಿರ್ವಹಣೆಯಲ್ಲಿಯೂ ಬದಲಾವಣೆಗಳಾಗುತ್ತವೆ. ಸ್ಮಾರ್ಟ್ಫೋನ್ ಬ್ಯಾಟರಿಯ ಮೇಲೂ ಚಳಿಯ ಪರಿಣಾಮ ಉಂಟಾಗುತ್ತದೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಚಳಿಗಾಲದಲ್ಲಿ ಫೋನ್ ಬ್ಯಾಟರಿ ವೇಗವಾಗಿ ಖಾಲಿಯಾಗುವುದನ್ನು ನೀವು ಗಮನಿಸಿರಬಹುದು.