ಭೀಕರ ಬರಗಾಲದ ನಡುವೆಯೂ ಕಲಬುರಗಿ ಜಿಲ್ಲೆಯ ಜಂಬಗಾ ಬಿ ಗ್ರಾಮದ ರೈತ ಶ್ರೀಕಾಂತ್ ಎರಡು ಎಕರೆ ಜಮೀನು ಲೀಸ್ ಪಡೆದು, 100 ಕ್ವಿಂಟಾಲ್ಗೂ ಹೆಚ್ಚು ಈರುಳ್ಳಿ ಬೆಳೆದಿದ್ದಾರೆ. ರೇನ್ ಪಂಪ್ ಮೂಲಕ ನೀರಾವರಿ ಮಾಡಿ ಬೆಳೆದ ಬೆಳೆಯನ್ನು ಖಾಸಗಿ ಕಂಪನಿ ಮೂಲಕ ಥೈಲ್ಯಾಂಡ್ಗೆ ರಫ್ತು ಮಾಡಿ, ಕ್ವಿಂಟಾಲ್ಗೆ 5-6 ಸಾವಿರ ರೂ.ನಂತೆ ಲಕ್ಷಾಂತರ ರೂ. ಲಾಭ ಗಳಿಸಿ ಇತರ ರೈತರಿಗೆ ಮಾದರಿಯಾಗಿದ್ದಾರೆ. ಕಲಬುರಗಿ, ನವೆಂಬರ್ 18: ರಾಜ್ಯದಲ್ಲಿ ಈ ವರ್ಷ ಅಸಾಧಾರಣ ಬರಗಾಲ ಎದುರಾಗಿದ್ದು, ಅನ್ನದಾತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.