ಚೀನಾದ ಶೆನ್ಝೆನ್ನಲ್ಲಿ ಇಂದು ನಡೆದ ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (APEC) ಶೃಂಗಸಭೆಯ ಔತಣಕೂಟದ ಗ್ರೂಪ್ ಫೋಟೋಗೂ ಮುನ್ನ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಬಳಿ ಬಂದು ಶೇಕ್ಹ್ಯಾಂಡ್ ಮಾಡಿ ಮಾತನಾಡಿದ್ದಾರೆ. ಟ್ರಂಪ್ ಮತ್ತು ಪುಟಿನ್ ಪರಸ್ಪರ ಹಸ್ತಲಾಘವ ಮಾಡಿ, ಉಭಯಕುಶಲೋಪರಿ ವಿಚಾರಿಸಿ, ಪರಸ್ಪರ ಭುಜ ತಟ್ಟಿಕೊಂಡು ಆತ್ಮೀಯತೆ ಪ್ರದರ್ಶಿಸಿದ್ದಾರೆ. 2025ರ ಆಗಸ್ಟ್ನಲ್ಲಿ ಅಲಾಸ್ಕಾದಲ್ಲಿ ನಡೆದ ಶೃಂಗಸಭೆಯ ನಂತರ ಟ್ರಂಪ್ ಮತ್ತು ಪುಟಿನ್ ನಡುವಿನ ಮೊದಲ ಮುಖಾಮುಖಿ ಭೇಟಿ ಇದಾಗಿದೆ. ಪುಟಿನ್ ಅವರು ಟ್ರಂಪ್ಗಿಂತ ಕೆಲವು ಗಂಟೆಗಳ ಮೊದಲೇ ಶೆನ್ಝೆನ್ ತಲುಪಿ ಕ್ಸಿ ಜಿನ್ಪಿಂಗ್ ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದ್ದರು.