ಮೂರು ದಿನಗಳ ಕಾಲ ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ ಕೃಷಿ ಮೇಳ ಇಂದಿಗೆ (ನವೆಂಬರ್ 18) ಅಂತ್ಯವಾಗಿದೆ. ಈ ಮೂರು ದಿನಗಳ ಕಾಲ ಕೃಷಿ ಮೇಳದಲ್ಲಿ ಎಲ್ಲರ ಗಮನಸೆಳೆದಿದ್ದು ಮಾತ್ರ ಗುಜರಾತ್ನ ಜಾಫ್ರಾಬಾದಿ ತಳಿಯ 1250 ಕೆ.ಜಿ ತೂಕದ 'ಪಂಚಕಲ್ಯಾಣಿ' ಎಂಬ ಎಮ್ಮೆ. ಹೌದು....ಬರೋಬ್ಬರಿ 1250 ಕೆ.ಜಿ. ತೂಕವಿರುವ ‘ಪಂಚ ಕಲ್ಯಾಣಿ’ ಎಮ್ಮೆ 11 ಅಡಿ ಉದ್ದವಿದ್ದು, ಐದೂಮುಕ್ಕಾಲು ಎಡಿ ಎತ್ತರವಿದ್ದು, ದಿನಕ್ಕೆ 25 ಲೀಟರ್ ಹಾಲು ನೀಡುವುದು ವಿಶೇಷವಾಗಿದೆ.