IE=edge" http-equiv="X-UA-Compatible">ಹಬ್ಬದೂಟಕ್ಕೆ ಹೊರಟಿದ್ದಾಗ ಬೈಕ್ ಅಪಘಾತ - ಮಗಳು ಸಾವು, ತಂದೆ ಸ್ಥಿತಿ ಗಂಭೀರ | Public TV - Latest Kannada News, Public TV Kannada Live, Public TV News. ಚಿಕ್ಕಮಗಳೂರು: ಸಂಬಂಧಿಯೊಬ್ಬರ ಮನೆಗೆ ದೀಪಾವಳಿ (Deepavali) ಹಬ್ಬಕ್ಕೆ ಹೊರಟಿದ್ದಾಗ ಬೈಕ್ ನಿಯಂತ್ರಣ ತಪ್ಪಿ ಮಣ್ಣಿನ ದಿಬ್ಬಕ್ಕೆ ಡಿಕ್ಕಿಯಾಗಿ (Accident) ಯುವತಿ ಸಾವನ್ನಪ್ಪಿದ ಘಟನೆ ತರೀಕೆರೆ (Tarikere) ತಾಲೂಕಿನ ಭೈರಾಪುರ ಕ್ರಾಸ್ ಬಳಿ ನಡೆದಿದೆ. ಈ ಅಪಘಾತದಲ್ಲಿ ಬೈಕ್ ಚಲಾಯಿಸುತ್ತಿದ್ದ ಯುವತಿಯ ತಂದೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಶಾಂತಿನಗರ ನಿವಾಸಿ ದ್ರಾಕ್ಷಾಯಿಣಿ (20) ಮೃತ ದುರ್ದೈವಿ. ಗಾಯಾಳು ರಮೇಶ್ ಅವರಿಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.