ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಸಹ-ಮಾಲೀಕ ಜಯ್ ಮೆಹ್ತಾ, ತಮ್ಮ ಶೇ.22.5ರಷ್ಟು ಪಾಲನ್ನು ಅಮೆರಿಕದ ಏರೆಸ್ ಮ್ಯಾನೇಜ್ಮೆಂಟ್ ಸಂಸ್ಥೆಗೆ ₹3,739 ಕೋಟಿಗೆ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದಾರೆ. ಈ ಒಪ್ಪಂದದಿಂದ ಕೆಕೆಆರ್ನ ಒಟ್ಟು ಮೌಲ್ಯ $1.78 ಬಿಲಿಯನ್ಗೆ ಏರಲಿದೆ. ಸಂಪೂರ್ಣ ನಗದು ವ್ಯವಹಾರಕ್ಕೆ ಬಿಸಿಸಿಐ ಅನುಮತಿ ಅಗತ್ಯವಿದ್ದು, ಬಿಸಿಸಿಐಗೂ ₹200 ಕೋಟಿ ಆದಾಯ ಬರಲಿದೆ. 2027 ರ ಐಪಿಎಲ್ ಮಿನಿ ಹರಾಜಿಗೆ ಎಲ್ಲಾ ಸಿದ್ಧತೆಗಳು ನಡೆಯುತ್ತಿರುವ ನಡುವೆ ಕೆಕೆಆರ್ ಪಾಳಯದಿಂದ ಸ್ಫೋಟಕ ಸುದ್ದಿಯೊಂದು ಹೊರಬಿದ್ದಿದೆ.