Avengers Doomsday: ನಿನ್ನೆಯಷ್ಟೆ (ನವೆಂಬರ್ 17) ಭಾರತದಲ್ಲಿ ಸಿನಿಮಾದ ಮುಂಗಡ ಬುಕಿಂಗ್ ಓಪನ್ ಆಗಿದ್ದು, ಭಾರತದಲ್ಲಿ ಸಿನಿಮಾಕ್ಕೆ ಭಾರಿ ಪ್ರತಿಕ್ರಿಯೆ ದೊರೆತಿದೆ. ಮೊದಲ ದಿನವೇ ಕೇವಲ ಅಡ್ವಾನ್ಸ್ ಬುಕಿಂಗ್ ಇಂದ ‘ಅವೇಂಜರ್ಸ್: ಡೂಮ್ಸ್ಡೇ’ ಸಿನಿಮಾ 10 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಅದರಲ್ಲೂ ಸಿನಿಮಾದ ಬಿಡುಗಡೆಗೆ ಇನ್ನೂ ಒಂದು ತಿಂಗಳು ಸಮಯವಿರುವಾಗಲೇ ಕೇವಲ ಅಡ್ವಾನ್ಸ್ ಬುಕಿಂಗ್ನಿಂದ ಇಷ್ಟು ದೊಡ್ಡ ಮೊತ್ತ ಗಳಿಕೆ ಮಾಡಿರುವುದು ಸಾಮಾನ್ಯ ಸಾಧನೆಯಲ್ಲ.