ಒಂದು ಟನ್ ಕಬ್ಬಿಗೆ 5500 ರೂಪಾಯಿ ನಿಗದಿ ಮಾಡುವಂತೆ ರೈತರು ಭಾರೀ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿದ್ದು, ಅಂತಿಮವಾಗಿ ಸಕ್ಕರೆ ಕಾರ್ಖಾನೆಗಳು ಟನ್ ಕಬ್ಬಿಗೆ 3600 ರೂ. ನೀಡಲು ಒಪ್ಪಿಕೊಂಡಿವೆ. ಹೀಗಾಗಿ ಕಬ್ಬು ಬೆಳೆಗಾರರು ಪ್ರತಿಭಟನೆ ವಾಪಸ್ ಪಡೆದುಕೊಂಡಿದ್ದಾರೆ. ಆದ್ರೆ, ಇದೀಗ ಸಹಕಾರಿ ಇಲಾಖೆ ಸ್ವಾಮ್ಯದ ಘಟಪ್ರಭಾ ಸಕ್ಕರೆ ಕಾರ್ಖಾನೆ, ಖಾಸಗಿ ಕಾರ್ಖಾನೆಗಳಿಗೆ ಸೆಡ್ಡುಹೊಡೆದಿದ್ದು, ಪ್ರತಿ ಟನ್ ಕಬ್ಬಿಗೆ 3,800 ರೂ. ಘೋಷಣೆ ಮಾಡಿದೆ. ಮೊದಲ ಕಂತಿನ ದರ 3,800 ನೀಡುವುದಾಗಿ ಟಪ್ರಭಾ ಸಕ್ಕರೆ ಕಾರ್ಖಾನೆ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಘೋಷಣೆ ಮಾಡಿದ್ದಾರೆ. ಅಲ್ಲದೇ ಸಕ್ಕರೆ ಮಾರಾಟದ ದರ ಆಧರಿಸಿ ರೈತರಿಗೆ ಹೆಚ್ಚುವರಿ ಹಣ ನೀಡುತ್ತೇವೆ ಎಂದಿದ್ದಾರೆ.