ಸಂಚಾರಿ ಕುರಿಗಾಹಿಗಳ ಬದುಕಿನ ಕುರಿತು ‘ಅನಂತ ಪಯಣ’ ಸಿನಿಮಾ ಮಾಡಲಾಗಿದೆ. ಬಿಡುಗಡೆಗೆ ಸಿದ್ಧವಾಗಿರುವ ಈ ಸಿನಿಮಾದಲ್ಲಿ ಶ್ರೀಕಾಕಾ, ನಿವಿಷ್ಕಾ ಪಾಟೀಲ್, ಸಂದೀಪ್ ನೀನಾಸಂ ಮುಂತಾದವರು ನಟಿಸಿದ್ದಾರೆ. ಸಿ.ಟಿ. ರವಿ ಮತ್ತು ಎಚ್.ಎಂ. ರೇವಣ್ಣ ಅವರು ಈ ಸಿನಿಮಾದ ಟ್ರೇಲರ್ ನೋಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ‘ಅನಂತ ಪಯಣ’ ಸಿನಿಮಾ ನವೆಂಬರ್ 27ರಂದು ಬಿಡುಗಡೆ ಆಗಲಿದೆ. ಸಂಚಾರಿ ಕುರಿಗಾಹಿಗಳ ಕಥೆಯನ್ನು ಆಧರಿಸಿ ಈ ಸಿನಿಮಾ ನಿರ್ಮಾಣ ಆಗಿದೆ. ಹಾಗಾಗಿ, ಕಥೆಗೆ ತಕ್ಕಂತೆಯೇ ನಿಜವಾದ ಸಂಚಾರಿ ಕುರಿಗಾಹಿಗಳನ್ನು ಕರೆಸಿ, ಅವರಿಂದ ಟ್ರೇಲರ್ ಬಿಡುಗಡೆ ಮಾಡಿಸಲಾಯಿತು. ‘ಕುರಿಗಾಹಿಗಳ ಬದುಕಿನ ಬಗ್ಗೆ ಕಥೆ ಹೊಂದಿರುವ ಈ ಸಿನಿಮಾ ಯಶಸ್ವಿ ಆಗಲಿ ಅಂತ ಹಾರೈಸುತ್ತೇನೆ.