ಉತ್ತರ ಕರ್ನಾಟಕದಲ್ಲಿ ಜೋಳದ ಬೆಲೆ ಕೆಜಿಗೆ 100 ರೂ ಗಡಿ ದಾಟಿದೆ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಷ್ಟೊಂದು ದುಬಾರಿ ಎನ್ನಲಾಗುತ್ತಿದೆ. ಇದರಿಂದ ರೈತರಿಗೆ ಬಂಪರ್ ಲಾಭವಾದರೂ, ರೊಟ್ಟಿ ಪ್ರಿಯರು ಮತ್ತು ಖಾನಾವಳಿ ಮಾಲೀಕರಿಗೆ ದರ ಏರಿಕೆ ಬಿಸಿ ತಟ್ಟಿದೆ. ಮಾರುಕಟ್ಟೆಯಲ್ಲಿ ಜೋಳದ ಕೊರತೆ ಎದುರಾಗಿದೆ. ಬಾಗಲಕೋಟೆ, ನವೆಂಬರ್ 18: ಉತ್ತರ ಕರ್ನಾಟಕದ ಜನರ ನೆಚ್ಚಿನ ಆಹಾರವಾದ ಜೋಳದ ರೊಟ್ಟಿಗೆ ಇದೀಗ ಬೆಲೆ ಏರಿಕೆಯ ಬಿಸಿ ತಟ್ಟುವ ಆತಂಕ ಶುರುವಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಬಿಳಿಜೋಳದ ಬೆಲೆ ಕೆಜಿಗೆ 100 ರೂ ಗಡಿ ದಾಟಿದ್ದು, ಮಾರುಕಟ್ಟೆಯಲ್ಲಿ ಕೆಜಿಗೆ 100ರಿಂದ 110 ರೂಪಾಯಿವರೆಗೆ ಮಾರಾಟವಾಗುತ್ತಿದೆ.