ಆನ್ಲೈನ್ ನಲ್ಲಿ ವಸ್ತುಗಳನ್ನು ಆರ್ಡರ್ ಮಾಡಿದಾಗ ಡೆಲಿವರಿ ಬಾಯ್ ಗಳು ಮನೆಬಾಗಿಲಿಗೆ ಆ ಐಟಮ್ಸ್ ತಲುಪಿಸುತ್ತಾರೆ. ಆದರೆ ಡೆಲಿವರಿ ಬಾಯ್ ಗ್ರಾಹಕನಿಗೆ ಬಾಯಿಗೆ ಬಂದಂತೆ ಬೈದಿದ್ದಾನೆ ಎನ್ನಲಾಗಿದೆ. ಇದಕ್ಕೆ ಕಾರಣ ಹೆಚ್ಚುವರಿ ವಸ್ತುಗಳನ್ನು ಆರ್ಡರ್ ಮಾಡಿದ್ದು ಎನ್ನಲಾಗಿದೆ. ಡೆಲಿವರಿ ಬಾಯ್ ವಸ್ತುಗಳನ್ನು ನೆಲಕ್ಕೆ ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ. ಬೆಂಗಳೂರು, ನವೆಂಬರ್ 18: ಇತ್ತೀಚೆಗಿನ ದಿನಗಳಲ್ಲಿ ಮನೆಗೆ ಬೇಕಾದ ಪ್ರತಿಯೊಂದು ವಸ್ತುಗಳನ್ನು ಆನ್ಲೈನ್ ನಲ್ಲೇ ಆರ್ಡರ್ ಮಾಡ್ತಾರೆ. ಆದರೆ ಇಲ್ಲೊಬ್ಬ ಗ್ರಾಹಕ ಅಮೆಜಾನ್ ನಲ್ಲಿ (Amazon) ಆರ್ಡರ್ ಮಾಡಿದ್ದೆ ತಪ್ಪಾಯ್ತು ಎನ್ನುವಂತಾಗಿದೆ.