ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಮಸೀದಿಯೊಂದರಲ್ಲಿ ಭದ್ರತಾ ಪಡೆಗಳಿಂದ ಸುತ್ತುವರಿಯಲ್ಪಟ್ಟಿದ್ದ ಕಾಶ್ಮೀರ ಕಣಿವೆಯ ಸ್ಥಳೀಯ ಉಗ್ರ ಹಾಗೂ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಕಮಾಂಡರ್ ಮೊಹಮ್ಮದ್ ಲತೀಫ್ ಭಟ್ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾನೆ. ಆತನನ್ನು ಹತ್ಯೆ ಮಾಡುವ ಮುನ್ನ ಭದ್ರತಾ ಅಧಿಕಾರಿಗಳು ಆತನಿಗೆ ಶರಣಾಗುವಂತೆ ನಡೆಸಿದ ದೀರ್ಘಕಾಲದ ವಿಡಿಯೋ ಕರೆ, ಉಗ್ರನ ಹಠಮಾರಿ ನಿಲುವು ಹಾಗೂ ಮಸೀದಿಗೆ ಹಾನಿಯಾಗದಂತೆ ಅಶ್ರುವಾಯು ಪ್ರಯೋಗಿಸಿ ಆತನನ್ನು ಹೊರಗೆಳೆದು ಹತ್ಯೆ ಮಾಡಿದ ಅಂತಿಮ ಕ್ಷಣಗಳ ರೋಚಕ ವಿವರಗಳು ಇದೀಗ ಬಹಿರಂಗವಾಗಿವೆ.