Karnataka Civil Aviation Policy: Minister MB Patil outlined Karnataka's upcoming Civil Aviation Policy, 50% UDAN cost-sharing, and industrial growth plans. ಮುಂದಿನ ಸಂಪುಟ ಸಭೆಯಲ್ಲಿ ರಾಜ್ಯದ ನೂತನ ನಾಗರಿಕ ವಿಮಾನಯಾನ ನೀತಿ ಅಂಗೀಕಾರ: ಶೇ.50 ವೆಚ್ಚ ಭರಿಸಲು ರಾಜ್ಯ ಸರ್ಕಾರ ಸಿದ್ಧ ಎಂದ ಎಂ.ಬಿ. ಪಾಟೀಲ!*. ಬೆಂಗಳೂರು: ಕೋಟ್ಯಾಂತರ ರೂ.ಖರ್ಚು ಮಾಡಿ ನಿರ್ಮಿಸಿದ ಶಿವಮೊಗ್ಗ ವಿಮಾನ ನಿಲ್ದಾಣ ಸ್ಥಗಿತವಾಗಿರುವುದಕ್ಕೆ ರಾಜ್ಯ ಸರ್ಕಾರ ಹೊಣೆಯಲ್ಲ. ಕೇಂದ್ರ ಸರಕಾರದ ದೋಷಪೂರಿತ ಉಡಾನ್ ನೀತಿಯೇ ಕಾರಣ. ಮುಂದಿನ ಸಂಪುಟ ಸಭೆಯಲ್ಲಿ ನಾಗರಿಕ ವಿಮಾನಯಾನ ನೀತಿ ಅಂಗೀಕಾರ ಮಾಡಲಾಗುವುದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಹೇಳಿದರು.