ಶೃಂಗೇರಿ: ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಿದಾಗ ಮಾತ್ರ ಉದ್ಯೋಗದಲ್ಲಿ ಉನ್ನತ ಸ್ಥಾನ ಗಳ. ವಿದ್ಯಾರ್ಥಿಗಳು ಬದುಕಿಗೆ ಪೂರಕವಾದ ಶಿಕ್ಷಣ ಪಡೆಯುವ ಗುರಿ ಇಟ್ಟುಕೊಳ್ಳಬೇಕು. ನಾವು ಪಡೆದ ಅಂಕಪಟ್ಟಿಗಳು ಪದವಿ ಪಡೆಯಲು ಮಾತ್ರ ಸಾಧ್ಯವಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳು ಸಮಗ್ರ ಕೌಶಲ ಅಭಿವೃದ್ಧಿಯನ್ನು ಉತ್ತೇಜಿಸಲು ಪೂರಕ. ಕಠಿಣವಾದ ಅಧ್ಯಯನದಿಂದ ವಿಮರ್ಶಾತ್ಮಕ ಚಿಂತನೆ, ತಾರ್ಕಿಕ ಸಾಮರ್ಥ್ಯ, ವಿಶ್ಲೇಷಣಾತ್ಮಕ ಗುಣ ಬೆಳೆಯುತ್ತದೆ ಎಂದರು.ಐಕ್ಯೂಎಸಿ ಸಂಚಾಲಕ ಡಾ. ಶಿವಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್, ಶೈಕ್ಷಣಿಕ ಸಂಯೋಜಕ ನಾಗರಾಜ್ ಇತರರಿದ್ದರು.