ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಆಟಗಳು ಕಣ್ಮರೆಯಾಗುತ್ತಿವೆ. ಮೊಬೈಲ್ಗಳೇ ಮನರಂಜನೆಯ ಸಾಧನಗಳಾಗಿರುವ ಇಂದಿನ ದಿನಗಳಲ್ಲಿ ಸಮೀಪದ ಜಕ್ಕಲಿ ಗ್ರಾಮದಲ್ಲಿ ಇಂದಿಗೂ. ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸುಮಾರು ಐದು ದಶಕಗಳ ಹಿಂದೆ ವೀರಪ್ಪಜ್ಜ ವಾಲಿ, ವಿರುಪಾಕ್ಷಪ್ಪ ವಾಲಿ, ರುದ್ರಪ್ಪ ಸಜ್ಜನರ, ವೀರಪ್ಪ ಸಂಕನೂರ, ಕರಬಸಪ್ಪ ಮಾಸ್ತರ ಕೇಸರಿ ಸೇರಿದಂತೆ ಹಲವು ಹಿರಿಯರು ಆರಂಭಿಸಿದ ಈ ಆಟ ಇಂದಿಗೂ ಮುಂದುವರಿದಿದೆ. ಗ್ರಾಮದಲ್ಲಿ 96 ಮನೆಗಳ ಪಗಡೆಯ ಪಟ್ಟ ಹಾಸಿ ಎರಡು ತಂಡಗಳಾಗಿ ಆಟವಾಡುತ್ತಾರೆ. ಕವಡೆಗಳ ಎಣಿಕೆ, ಕಾಯಿಗಳ ಚಲನೆ, ಎದುರಾಳಿಯ ಕಾಯಿಯನ್ನು ಕಡಿದು ಮುನ್ನಡೆಯುವ ತಂತ್ರಗಾರಿಕೆ ಆಟಕ್ಕೆ ರೋಚಕತೆ ನೀಡುತ್ತದೆ.