Samantha outfit price : ನಟಿ ಸಮಂತಾ ರುತ್ ಪ್ರಭು ಅವರ ಹೊಸ ಫೋಟೋಗಳು ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿವೆ. ಕೆಂಪು ಬಣ್ಣದ ಸುಂದರ ಉಡುಪಿನಲ್ಲಿ ಬೇಬಿ ಬಂಪ್ ಫ್ಲಾಂಟ್ ಮಾಡುತ್ತಾ, ಮುಖದಲ್ಲಿ. ಪತಿ ಹಾಗೂ ನಿರ್ದೇಶಕ ರಾಜ್ ನಿಡಿಮೋರು ಮತ್ತು ಕುಟುಂಬದ ಸದಸ್ಯರೊಂದಿಗೆ ಮನೆಯಲ್ಲಿ ನಡೆದ ವಿಶೇಷ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು.ಈ ಕಾರ್ಯಕ್ರಮಕ್ಕೆ ಸಮಂತಾ ಸಾಂಪ್ರದಾಯಿಕ ಹಾಗೂ ಸರಳ ಲುಕ್ಗೆ ಆದ್ಯತೆ ನೀಡಿದ್ದರು. ಕೆಂಪು ಬಣ್ಣದ ಕುರ್ತಾ ಸೆಟ್ ಧರಿಸಿದ್ದ ಅವರು, ತಮ್ಮ ಬೇಬಿ ಬಂಪ್ ಅನ್ನು ಮುದ್ದಾಗಿ ಹಿಡಿದುಕೊಂಡು ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಕುಟುಂಬದ ಮಹಿಳೆಯರು ಸಮಂತಾ ಅವರನ್ನು ಸುತ್ತುವರಿದು ಆಶೀರ್ವದಿಸುತ್ತಿರುವ ಚಿತ್ರವೂ ವಿಶೇಷ ಗಮನ ಸೆಳೆದಿದೆ..