ಯಾದಗಿರಿ: ಸವದತ್ತಿ ಯಲ್ಲಮ್ಮ ದೇವಿಗೆ ಹಾವು ಸುತ್ತಿಕೊಂಡು ಪಾದ ನುಂಗಿದೆ ಎಂಬ ವದಂತಿ ವ್ಯಾಪಕವಾಗಿ ಹರಡಿದ ಬೆನ್ನಲ್ಲೆ ಜಿಲ್ಲೆಯ ಭೀಮಾ ಮತ್ತು ಕೃಷ್ಣಾ ನದಿಯ ವಿವಿಧೆಡೆ ಒಂದೆರಡು ದಿನಗಳಿಂದ ಸಾವಿರ. ಹೀಗಾಗಿ ಪಾದ ಕಟ್ಟಿಕೊಂಡವರು ನದಿಯಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸಿ ಹಳೆಯ ಪಾದ ಬಿಚ್ಚಿ ಹೊಸ ಪಾದ ಕಟ್ಟಿಕೊಳ್ಳಬೇಕು. ಹಳೆಯ ಬಟ್ಟೆಗಳನ್ನು ತ್ಯಜಿಸಿ ಹೊಸ ಬಟ್ಟೆ ಧರಿಸಬೇಕು ಎಂಬ ಸುದ್ದಿ ಹರಡಿದೆ. ಇದನ್ನು ನಂಬಿದ ಭಕ್ತರು ನದಿಗಳತ್ತ ಧಾವಿಸುತ್ತಿದ್ದು, ಭೀಮಾ ಮತ್ತು ಕೃಷ್ಣಾ ನದಿ ದಡದಲ್ಲಿ ಸಾವಿರಾರು ಜನರು ಹಳೆಯ ಪಾದ ಬಿಚ್ಚಿ ಹೊಸ ಪಾದ ಕಟ್ಟಿಕೊಂಡು ಸ್ನಾನ ಮಾಡುವುದು ಜೋರಾಗಿಯೇ ನಡೆದಿದೆ.