ಬಸವಕಲ್ಯಾಣ: ವಾತ್ಸಲ್ಯದ ಖಜಾನೆಯಾಗಿರುವ ತಾಯಿ ತನ್ನ ಮಕ್ಕಳಿಗೆ ಸಂಸ್ಕಾರ, ಸದಾಚಾರಗಳನ್ನು ಧಾರೆಯರೆಯುತ್ತಾ, ಕುಟುಂಬ ಹಾಗೂ ಸಮಾಜದಲ್ಲಿ ಸಾಂಸ್ಕೃತಿಕ ಆರೋಗ್ಯವನ್ನು ಕಾಪಾಡುವ ಜವಾಬ್ದಾರಿಯೂ ಹೊತ್ತ. ಹಾರಕೂಡ ಶ್ರೀಮಠದಲ್ಲಿ ಸೋಮವಾರ ಆಯೋಜಿಸಿದ್ದ ಸಹಸ್ರ ಚಂದ್ರ ದರ್ಶನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಗುರುವಂದನೆ ಸ್ವೀಕರಿಸಿ ಮಾತನಾಡಿದ ಶ್ರೀಗಳು, ತನ್ನಲ್ಲಿಯ ವಿಶಿಷ್ಟ ಕೌಶಲದಿಂದ ಮನೆಯ ಬಾಹ್ಯ ಮತ್ತು ಆಂತರಿಕ ಸೌಂದರ್ಯವನ್ನು ಕಾಪಾಡುತ್ತ ಜಗತ್ತಿನ ಉಳಿವು ಮತ್ತು ಮುನ್ನಡೆಗೆ ಕಾರಣವಾದ ತಾಯಿ ವಿಶ್ವ ಕಲಾವಿದೆಯಾಗಿ ಕಾಣುತ್ತಾಳೆ ಎಂದರು.ತ್ಯಾಗ, ಸೇವೆ, ಪ್ರೀತಿಯ ಪ್ರತಿಕವಾಗಿರುವ ತಾಯಿಗೆ ಹೋಲಿಕೆಯಾಗುವ ಇನ್ನೊಂದು ಜೀವ ಈ ಜಗತ್ತಿನಲ್ಲಿ ಸಿಗುವುದಿಲ್ಲ.