Ramayana 2: ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ನಟನೆಯ 'ರಾಮಾಯಣ' ಮೊದಲ ಭಾಗ ನವೆಂಬರ್ 5ರಂದು ವಿಶ್ವಾದ್ಯಂತ ತೆರೆಕಂಡಿದೆ. ಸಿನಿಮಾದಲ್ಲಿ ಸನ್ನಿ ಡಿಯೋಲ್ ಅವರ ಹನುಮಂತನ ಪಾತ್ರದ ಸಣ್ಣ ಝ. ಸಿನಿಮಾದಲ್ಲಿ ಸನ್ನಿ ಡಿಯೋಲ್ ಅವರ ಹನುಮಂತನ ಪಾತ್ರದ ಸಣ್ಣ ಝಲಕ್ ಮಾತ್ರ ತೋರಿಸಲಾಗಿತ್ತು. ಇದೀಗ 'ರಾಮಾಯಣ 2'ರಲ್ಲಿ ಹನುಮಂತನ ಪಾತ್ರ ಹೇಗಿರಲಿದೆ ಎಂಬ ಬಗ್ಗೆ ಸಿನಿಮಾಟೋಗ್ರಾಫರ್ ಪಂಕಜ್ ಕುಮಾರ್ ಇಂಟರೆಸ್ಟಿಂಗ್ ಅಪ್ಡೇಟ್ ನೀಡಿದ್ದಾರೆ.'ರಾಮಾಯಣ' ಸಿನಿಮಾದ ಸಿನಿಮಾಟೋಗ್ರಾಫರ್ಗಳಾದ ಪಂಕಜ್ ಕುಮಾರ್ ಮತ್ತು ಮಹೇಶ್ ಲಿಮಯೆ ಪೈಕಿ ಒಬ್ಬರಾದ ಪಂಕಜ್, ಎರಡನೇ ಭಾಗದಲ್ಲಿ ಹನುಮಂತನ ಹಲವು ಅದ್ಭುತ ದೃಶ್ಯಗಳನ್ನು ಈಗಾಗಲೇ ಚಿತ್ರೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.