ಶೃಂಗೇರಿ: ಮಲೆನಾಡಿನಲ್ಲಿ ಜೀಪ್ ರ್ಯಾಲಿಗಳು ನಡೆಯುವುದು ವಿರಳ. ರ್ಯಾಲಿಗಳು ವಿದೇಶಗಳಲ್ಲಿ ಮಾತ್ರ ನಡೆಯುತ್ತಿದ್ದವು. ಪ್ರಸ್ತುತ ರ್ಯಾಲಿಯನ್ನು ನಡೆಸುವ ಸ್ಥಳೀಯ ಯುವಕರ ಉತ್ಸಾಹ ಶ್ಲಾಘನೀಯ ಎಂದ. ಶನಿವಾರ ಶೃಂಗೇರಿ ಅಡ್ವೆಂಚರ್ ಮತ್ತು ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ಮಲೆನಾಡು ತ್ರಿಲ್ಸ್ ಮೋಟಾರ್ ರ್ಯಾಲಿ ಉದ್ಘಾಟಿಸಿ ಮಾತನಾಡಿದರು. ಇಂಥ ರ್ಯಾಲಿಗಳನ್ನು ನಡೆಸಲು ಡಿಸೆಂಬರ್ನಲ್ಲಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ಕಾನೂನು ರೂಪಿಸಿ ಈ ಕ್ರೀಡೆಗೆ ಪ್ರೋತ್ಸಾಹ ನೀಡುತ್ತೇವೆ. ಇಂಥ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ದೇಶಿಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ದೊರಕುತ್ತದೆ ಎಂದರು.ರಾಜ್ಯ ಮತ್ತು ಹೊರ ರಾಜ್ಯದಿಂದ 120 ಜೀಪ್ಗಳ ಚಾಲಕರು ಭಾಗವಹಿಸಿದ್ದರು.