ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಪುರ ಗ್ರಾಮದಲ್ಲಿ ಬೆಚ್ಚಿಬೀಳಿಸುವ ದರೋಡೆ ನಡೆದಿದೆ. ಗೃಹಪ್ರವೇಶವಾಗಿ ಕೇವಲ ಒಂದು ತಿಂಗಳಾಗಿದ್ದ ಹೊಸ ಮನೆಗೆ ನುಗ್ಗಿದ ಮೂವರು ಮುಸುಕುಧಾರಿಗಳು ದಂಪತಿಗೆ ಲಾಂಗ್, ಮಚ್ಚು ತೋರಿಸಿ ಬೆದರಿಸಿದ್ದಾರೆ. ಸುಮಾರು 117 ಗ್ರಾಂ ಚಿನ್ನಾಭರಣ, 8 ಸಾವಿರ ರೂಪಾಯಿ ನಗದು ಹಾಗೂ ಮೊಬೈಲ್ಗಳನ್ನು ದೋಚಿ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ದೇವನಹಳ್ಳಿ, ನವೆಂಬರ್ 18: ಹಲವು ಕನಸುಗಳನ್ನು ಹೊತ್ತು, ಸಾಲ ಮಾಡಿ ಕಟ್ಟಿಸಿದ ಹೊಸ ಮನೆ. ಇನ್ನೇನು ನೆಮ್ಮದಿಯ ಜೀವನ ಆರಂಭಿಸಬೇಕು ಎನ್ನುವಷ್ಟರಲ್ಲಿ ಖದೀಮರು ಮನೆಗೆ ನುಗ್ಗಿ ದಂಪತಿಯನ್ನು ಬೆದರಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ.