ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ಲಷ್ಕರ್-ಎ-ತೊಯ್ಬಾ ಕಮಾಂಡರ್ ಲತೀಫ್ ಭಟ್ ಸಾವನ್ನಪ್ಪಿದ್ದಾನೆ. ಭದ್ರತಾ ಪಡೆಗಳು ವಿಡಿಯೋ ಕರೆ ಮೂಲಕ ಶರಣಾಗುವಂತೆ ಮನವಿ ಮಾಡಿದ್ದರೂ, ಆತ ನಿರಾಕರಿಸಿದ್ದನು. ಈ ಕಾರ್ಯಾಚರಣೆಯು ಸಿಆರ್ಪಿಎಫ್ ಸಿಬ್ಬಂದಿ ಮೇಲೆ ನವೆಂಬರ್ 11ರಂದು ನಡೆದ ದಾಳಿಯ ತನಿಖೆಯ ಭಾಗವಾಗಿತ್ತು. ಹಲವು ಅಪರಾಧಗಳಲ್ಲಿ ಭಾಗಿಯಾಗಿದ್ದ ಭಟ್ನ ಸಾವು ಭದ್ರತಾ ಪಡೆಗಳಿಗೆ ದೊಡ್ಡ ಯಶಸ್ಸು. ಕುಲ್ಗಾಮ್, ನವೆಂಬರ್ 18: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೊಯ್ಬಾ(ಎಲ್ಇಟಿ) ಸಂಘಟನೆಯ ಉನ್ನತ ಕಮಾಂಡರ್ ಲತೀಫ್ ಭಟ್ ಸಾವನ್ನಪ್ಪಿದ್ದಾನೆ. ಬುಧವಾರ ಜಂಗಲ್ಪೋರಾ ಗ್ರಾಮದಲ್ಲಿ ನಡೆದ ಎನ್ಕೌಂಟರ್ನಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.