ಮನೆಗೆ ಗಿಡಗಳನ್ನು ಆಯ್ಕೆ ಮಾಡುವಾಗ ವಾಸ್ತು ಶಾಸ್ತ್ರದ ನಿಯಮಗಳನ್ನು ಪರಿಗಣಿಸುವುದು ಮುಖ್ಯ. ಕೆಲವು ಗಿಡಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಿ, ಕುಟುಂಬದಲ್ಲಿ ಮಾನಸಿಕ ಒತ್ತಡ, ಆರ್ಥಿಕ ಸಮಸ್ಯೆ ಹಾಗೂ ಪ್ರಗತಿಗೆ ಅಡ್ಡಿಯಾಗಬಹುದು. ಕಳ್ಳಿಗಿಡ, ಬೋನ್ಸಾಯ್ ಮತ್ತು ಬಿಳಿ ಹಾಲು ಬರುವ ಸಸ್ಯಗಳನ್ನು ಮನೆಯೊಳಗೆ ಇಡುವುದರಿಂದ ವಾಸ್ತು ದೋಷ ಉಂಟಾಗಿ, ಸಂಪತ್ತು ಹಾಗೂ ನೆಮ್ಮದಿಗೆ ಧಕ್ಕೆ ಬರುತ್ತದೆ. ಸರಿಯಾದ ಗಿಡಗಳನ್ನು ಆಯ್ಕೆ ಮಾಡಿ. ಮನೆಗೆ ಗಿಡಗಳನ್ನು ಆಯ್ಕೆ ಮಾಡುವಾಗ ಕೇವಲ ಸೌಂದರ್ಯವನ್ನು ಮಾತ್ರ ನೋಡಿದರೆ ಸಾಲದು. ವಾಸ್ತು ಶಾಸ್ತ್ರದ ಪ್ರಕಾರ ಕೆಲವು ಗಿಡಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ.