ಕಿರಣ್ ರಾಜ್ ಅಭಿನಯದ ಜಾಕಿ 42 ಸಿನಿಮಾದ ಹೊಸ ವರ್ಷದ ಪಾರ್ಟಿ ಹಾಡು ಸೆಲ್ಫಿ ಸರೋಜಾ ಬಿಡುಗಡೆಯಾಗಿದೆ. ಮಮತಾ ಶರ್ಮಾ ಹಾಗೂ ಸಿಂಹ ಧ್ವನಿ ನೀಡಿರುವ ಈ ಹಾಡಿಗೆ ವಿನೋದ್ ಯಜಮನ್ಯ ಸಂಗೀತವಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಾ ಪ್ರೇಕ್ಷಕರನ್ನು ರಂಜಿಸುತ್ತಿದೆ. ಹೊಸ ವರ್ಷ ಸಮೀಪಿಸಿದರೆ ಸಾಕು ಪಾರ್ಟಿ ಹಾಡುಗಳು ಸಾಲು ಸಾಲಾಗಿ ಬಿಡುಗಡೆ ಆಗುತ್ತವೆ. ಈ ಹಾಡುಗಳು ಸೆಲೆಬ್ರೇಷನ್ ವೇಳೆ ಬಳಕೆ ಆಗುತ್ತವೆ. ಹೊಸ ವರ್ಷಕ್ಕೆ ಒಂದೂವರೆ ತಿಂಗಳು ಬಾಕಿ ಇರುವಾಗಲೇ ‘ಜಾಕಿ 42’ ಚಿತ್ರದಿಂದ ಹಾಡೊಂದು ಬಿಡುಗಡೆ ಆಗಿದೆ. ‘ಜಾಕಿ 42’ ಚಿತ್ರಕ್ಕೆ ಕಿರಣ್ ರಾಜ್ ಹೀರೋ ಆದರೆ, ಹೃತಿಕಾ ಶ್ರೀನಿವಾಸ್ ನಾಯಕಿ.