ಐಪಿಎಲ್ 2027 ಮಿನಿ ಹರಾಜಿಗೆ ವೇದಿಕೆ ಸಿದ್ಧವಾಗಿದೆ. ಆಟಗಾರರ ರಿಟೆನ್ಷನ್ ಬಳಿಕ ತಂಡಗಳ ಪರ್ಸ್ನಲ್ಲಿ ಉಳಿದಿರುವ ಹಣ ಮತ್ತು ಖಾಲಿ ಇರುವ ಆಟಗಾರರ ಸ್ಥಾನಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಲಕ್ನೋ ಸೂಪರ್ ಜೈಂಟ್ಸ್ ಅತಿ ಹೆಚ್ಚು ಹಣದೊಂದಿಗೆ ಹರಾಜಿಗೆ ಸಿದ್ಧವಾಗಿದ್ದರೆ, ಗುಜರಾತ್ ಟೈಟಾನ್ಸ್ ಬಳಿ ಕಡಿಮೆ ಹಣವಿದೆ. ಡೆಲ್ಲಿ ಮತ್ತು ಮುಂಬೈ ಹೆಚ್ಚು ಆಟಗಾರರನ್ನು ಖರೀದಿಸಬಹುದು. ಡಿಸೆಂಬರ್ 16ರಂದು ಗೋವಾದಲ್ಲಿ ಹರಾಜು ನಡೆಯಲಿದೆ.