ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಪ್ರಸಿದ್ಧ ರಾಜಮುಡಿ ಉತ್ಸವ ಅತ್ಯಂತ ವೈಭವದಿಂದ ನೆರವೇರಿದೆ. ಪಾಂಡವಪುರ ತಾಲೂಕಿನ ಚಲುವನಾರಾಯಣಸ್ವಾಮಿ ದೇವಾಲಯದಲ್ಲಿ ನಡೆದ ಈ ಉತ್ಸವದಲ್ಲಿ, ಕಾರ್ತಿಕ ಮಾಸದ ಅಂಗವಾಗಿ ಮೈಸೂರು ಅರಸರು ಸಮರ್ಪಿಸಿದ್ದ ವಜ್ರಖಚಿತ ರಾಜಮುಡಿ ಕಿರೀಟವನ್ನು ಸ್ವಾಮಿಗೆ ಧಾರಣೆ ಮಾಡಲಾಯಿತು. ಸಹಸ್ರಾರು ಭಕ್ತರು ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಮಂಡ್ಯ, ನವೆಂಬರ್ 18: ಮಂಡ್ಯ ಜಿಲ್ಲೆಯ ಸುಪ್ರಸಿದ್ಧ ಪುಣ್ಯಕ್ಷೇತ್ರ ಮೇಲುಕೋಟೆಯಲ್ಲಿ ವಾರ್ಷಿಕ ರಾಜಮುಡಿ ಉತ್ಸವ ಕಳೆದ ರಾತ್ರಿ ಅತ್ಯಂತ ವೈಭವ ಮತ್ತು ಭಕ್ತಿ ಭಾವದಿಂದ ನೆರವೇರಿತು. ಪಾಂಡವಪುರ ತಾಲೂಕಿನಲ್ಲಿರುವ ಐತಿಹಾಸಿಕ ಚಲುವನಾರಾಯಣಸ್ವಾಮಿ ದೇಗುಲವು ಈ ಅದ್ಧೂರಿ ಉತ್ಸವಕ್ಕೆ ಸಾಕ್ಷಿಯಾಯಿತು.