ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಬುಧವಾರ (ನ.18) ಮುಂಜಾನೆ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಮತ್ತೆ ಭೀಕರ ಗುಂಡಿನ ಚಕಮಕಿ ಆರಂಭವಾಗಿದೆ. ಇದೇ ಜಿಲ್ಲೆಯಲ್ಲಿ. ಇದೇ ಜಿಲ್ಲೆಯಲ್ಲಿ ಉಗ್ರನೊಬ್ಬನನ್ನು ಸೇನೆ ಹೊಡೆದುರುಳಿಸಿದ ಕೇವಲ ಎರಡು ದಿನಗಳ ಬೆನ್ನಲ್ಲೇ ಈ ಹೊಸ ಕಾರ್ಯಾಚರಣೆ ಶುರುವಾಗಿದ್ದು, ಇತ್ತೀಚಿನ ಸಿಆರ್ಪಿಎಫ್ ಮೇಲಿನ ದಾಳಿಯ ಮಾಸ್ಟರ್ಮೈಂಡ್, ಲಷ್ಕರ್-ಎ-ತೈಬಾ (LeT) ಕಮಾಂಡರ್ ಲತೀಫ್ ಭಟ್ನನ್ನು ಭದ್ರತಾ ಪಡೆಗಳು ಸುತ್ತುವರಿದಿವೆ ಎನ್ನಲಾಗಿದೆ..ಕುಲ್ಗಾಂ ಜಿಲ್ಲೆಯ ಜಂಗಲ್ಪೋರಾ ಗ್ರಾಮದಲ್ಲಿ ಈ ಗುಂಡಿನ ಚಕಮಕಿ ನಡೆಯುತ್ತಿದೆ. ಇತ್ತೀಚೆಗೆ ಭಯೋತ್ಪಾದಕ ದಾಳಿ ನಡೆದ ಸ್ಥಳದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲೇ ಉಗ್ರರು ಅಡಗಿರುವ ಸುಳಿವು ಸಿಕ್ಕಿದೆ.