ಕನಕಗಿರಿ: ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆಗೊಂಡ ಪಟ್ಟಣದ ಲೇಔಟ್ಗಳು ಸಂಪೂರ್ಣ ಅಭಿವೃದ್ಧ ಆಗುವವರೆಗೆ ನಮೂನೆ-3 ನೀಡದಂತೆ ಒತ್ತಾಯಿಸಿ ಕರವೇ (ನಾರಾಯಣಗೌಡ ಬಣ) ತಾಲೂಕು ಘಟಕದಿಂದ ಮುಖ್ಯಾ. ನಾಗರಾಜಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.ತಾಲೂಕು ಅಧ್ಯಕ್ಷ ಹರೀಶ ಪೂಜಾರ ಮಾತನಾಡಿ, ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಲೇಔಟ್ಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆಗೊಂಡ ಬಳಿಕ ಶೇ.40 ನಿವೇಶನಗಳು ಮಂಜೂರು ಮಾಡಲಾಗುತ್ತದೆ. ಇನ್ನುಳಿದ ಶೇ.60 ನಿವೇಶನಗಳನ್ನು ಬಡಾವಣೆಯಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಿದ ಬಳಿಕ ಬಿಡುಗಡೆ ಮಾಡಬೇಕು. ಆದರೆ, ಹಲವು ಲೇಔಟ್ಗಳಲ್ಲಿ ಚರಂಡಿ, ನೀರಿನ ಪೈಪ್ಲೈನ್, ವಿದ್ಯುತ್, ಉದ್ಯಾನ ಸೇರಿ ಇತರ ಸೌಲಭ್ಯಗಳನ್ನು ಒದಗಿಸಿಲ್ಲ.