ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೆ ಹೆಚ್ಚಾಗುವ ಲಕ್ಷಣಗಳು ಕಾಣಿಸುತ್ತಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ನಲ್ಲಿರುವ ಇನ್ನೂ ಕೆಲವು ಗುರಿಗಳ ಮೇಲೆ ದಾಳಿ ನಡೆಸಬೇಕಿದೆ ಎಂದು ಹೇಳಿದ ಬೆನ್ನಲ್ಲೇ, ಇರಾನ್ ಎಚ್ಚರಿಕೆಯ ಸಂದೇಶ ರವಾನಿಸಿದೆ. ಅಮೆರಿಕದೊಂದಿಗೆ ಮತ್ತೊಂದು ಯುದ್ಧ ಆರಂಭವಾದರೆ ಅದು ಹಿಂದಿನ ಸಂಘರ್ಷಕ್ಕಿಂತ ಹೆಚ್ಚು ಕಾಲ ಮುಂದುವರಿಯಬಹುದು. ಯುದ್ಧ ಯಾವಾಗ ಮುಗಿಯಬೇಕು ಎಂಬುದನ್ನು ಅಮೆರಿಕ ಅಧ್ಯಕ್ಷರು ನಿರ್ಧರಿಸಲು ಸಾಧ್ಯವಾಗುವುದಿಲ್ಲ ಎಂದು ಇರಾನ್ ಸೇನೆ ಎಚ್ಚರಿಸಿದೆ. ಇರಾನ್ ಸೇನೆಯ ವಕ್ತಾರ ಮೊಹಮ್ಮದ್ ಅಕ್ರಮಿನಿಯಾ ಅವರು ಸರ್ಕಾರಿ ದೂರದರ್ಶನದ ಮೂಲಕ ಈ ಎಚ್ಚರಿಕೆ ನೀಡಿದ್ದಾರೆ.