Bypoll Results 2026: ವಿಜಯ್ ಟಿವಿಕೆಗೆ ಡಬಲ್ ಗೆಲುವು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಅಬ್ಬರ! ಅಸ್ಸಾಂ, ಪುದುಚೆರಿ ಯಾರ ಪಾಲು. ನವದೆಹಲಿ: ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಪುದುಚೇರಿಯಾದ್ಯಂತ ಆರು ಉಪಚುನಾವಣೆಗಳ ಮತ ಎಣಿಕೆ ಇಂದು ಶುಕ್ರವಾರ (ಅಕ್ಟೋಬರ್ 9) ಪ್ರಕಟವಾಗಿದೆ. ಈ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಸವಾಲಾಗಿದ್ದ ಕ್ಷೇತ್ರವನ್ನು ಸಿಎಂ ವಿಜಯ್ ನೇತೃತ್ವದ ಟಿವಿಕೆ ಪಕ್ಷದ ಅಭ್ಯರ್ಥಿ ಗೆದ್ದಿದ್ದಾರೆ. ಈ ಮೂಲಕ ಆಡಳಿತಾರೂಢ ಟಿವಿಕೆಗೆ ಸಿಹಿ ಸುದ್ದಿ ಸಿಕ್ಕಿದೆ. ತಮಿಳುನಾಡಿನ ಧಾರಾಪುರಂ ಉಪಚುನಾವಣೆಯಲ್ಲಿ TVK ಗೆಲುವು ಸಾಧಿಸಿದೆ.