ಕಂದಾಯ ಇಲಾಖೆಯ 63 ಅಧಿಕಾರಿಗಳಿಗೆ ಗುಡ್ನ್ಯೂಸ್: ತಹಶೀಲ್ದಾರ್ ಗ್ರೇಡ್-1ರಿಂದ KAS ಕಿರಿಯ ಶ್ರೇಣಿಗೆ ಬಡ್ತಿ. ಬೆಂಗಳೂರು: ರಾಜ್ಯ ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದತಹಶೀಲ್ದಾರ್ ಗ್ರೇಡ್-1 ವೃಂದದ 63 ಅಧಿಕಾರಿಗಳಿಗೆ ಗುಡ್ನ್ಯೂಸ್ ನೀಡಲಾಗಿದೆ. ಇಲಾಖೆ ವ್ಯಾಪ್ತಿಯಲ್ಲಿ ಬಹುಕಾಲದಿಂದ ಬಾಕಿ ಉಳಿದಿದ್ದ ಬಡ್ತಿ ಪ್ರಕ್ರಿಯೆಗೆ ವೇಗ ನೀಡಲಾಗಿದೆ.ಸದರಿ 63 ಅಧಿಕಾರಿಗಳಿಗೆ ಕರ್ನಾಟಕ ಆಡಳಿತ ಸೇವೆಯ (KAS) ಕಿರಿಯ ಶ್ರೇಣಿ ವೃಂದಕ್ಕೆ ಪದೋನ್ನತಿ ನೀದಿದ್ದೇವೆ ಎಂದು ಕಂದಾಯ ಸಚಿವ ಮತ್ತು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ತಿಳಿಸಿದ್ದಾರೆ.