ಶೈನ್ ಶೆಟ್ಟಿ ನಟನೆಯ ‘ಶಂಕರಾಭರಣ’ ಸಿನಿಮಾ ನವೆಂಬರ್ 20ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ಶೈನ್ ಶೆಟ್ಟಿ ಅವರು ಬಸ್ ಚಾಲಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಬಸ್ ಕೂಡ ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರದ ರೀತಿಯಲ್ಲಿ ಕಾಣಲಿದೆ. ಆ ಬಗ್ಗೆ ಅವರು ಮಾತನಾಡಿದ ವಿಡಿಯೋ ಇಲ್ಲಿದೆ.. ಈ ಬಸ್ ಸಿಗುವುದು ನಮಗೆ ತುಂಬಾ ಕಷ್ಟ ಆಗಿತ್ತು. ಮಂಜೇಶ್ವರ ಎಂಬ ಜಾಗದಲ್ಲಿ ನಮಗೆ ಇದು ಸಿಕ್ತು. ಇದು ನಮ್ಮ ಕೈಗೆ ಬಂದ ಬಳಿಕ ಚಮತ್ಕಾರ ಆಗಿದೆ. ಈ ಸಿನಿಮಾದ ಒಳಗೆ 18 ವರ್ಷಗಳ ತಪಸ್ಸು ಇದೆ.