ಚಳಿಗಾಲದಲ್ಲಿ ಚರ್ಮ ಒಣಗುವುದರಿಂದ ಹಿಮ್ಮಡಿಗಳು ಗಟ್ಟಿಯಾಗಿ ಬಿರುಕು ಬಿಡಬಹುದು. ಈ ಸಮಸ್ಯೆಯಿಂದ ನೋವು ಮತ್ತು ಕಿರಿಕಿರಿ ಉಂಟಾಗಬಹುದು. ತೆಂಗಿನೆಣ್ಣೆ, ಶಿಯಾ ಬಟರ್, ಪೆಟ್ರೋಲಿಯಂ ಜೆಲ್ಲಿ ಮತ್ತು ಅಲೋವೆರಾ ಜೆಲ್ನಂತಹ ಆರೈಕೆ ವಿಧಾನಗಳು ಚರ್ಮದ ತೇವಾಂಶ ಕಾಪಾಡಲು ಸಹಾಯ ಮಾಡುತ್ತವೆ. ಹಿಮ್ಮಡಿಗಳ ಬಿರುಕು ಕಡಿಮೆ ಮಾಡಲು ಅನುಸರಿಸಬೇಕಾದ ಸರಳ ಮುನ್ನೆಚ್ಚರಿಕೆಗಳ ಬಗ್ಗೆ ಸ್ಟೋರಿ ಮೂಲಕ ತಿಳಿದುಕೊಳ್ಳಿ. ಅದರಲ್ಲೂ ಪಾದಗಳ ಹಿಮ್ಮಡಿಗಳಲ್ಲಿ ತೇವಾಂಶ ಕಡಿಮೆಯಾದಾಗ ಚರ್ಮ ಗಟ್ಟಿಯಾಗಿ, ಬಿರುಕು ಬಿಡಲು ಆರಂಭಿಸುತ್ತದೆ. ಕೆಲವೊಮ್ಮೆ ಈ ಬಿರುಕುಗಳು ಆಳವಾಗಿ ನೋವು ಮತ್ತು ರಕ್ತಸ್ರಾವಕ್ಕೂ ಕಾರಣವಾಗಬಹುದು. ಹಿಮ್ಮಡಿಗಳ ಒಣ ಚರ್ಮದ ಸಮಸ್ಯೆಯನ್ನು ಕಡಿಮೆ ಮಾಡಲು ಕೆಲವು ಸರಳ ಆರೈಕೆ ವಿಧಾನಗಳನ್ನು ಅನುಸರಿಸಬಹುದು.