ಕಿರುತೆರೆ ನಟಿ ರಮಿಕಾ ಶಿವು ಅವರು ‘ಪ್ರೇಮದ ಊರಲಿ’ ಸಿನಿಮಾ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರನ್ನು ಕರ್ನಾಟಕದ ಕ್ರಶ್ ಎಂದು ಅಭಿಮಾನಿಗಳು ಕರೆಯುತ್ತಿದ್ದಾರೆ. ಈಗ ಈ ಸಿನಿಮಾ 50 ದಿನಗಳನ್ನು ಪೂರೈಸಿದೆ. ಈ ಖುಷಿಯಲ್ಲಿ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಈ ಚಿತ್ರದಲ್ಲಿ ಅವರು ಮಾಡಿದ ವಸಂತಾ ಎಂಬ ಪಾತ್ರ ಜನರಿಗೆ ಇಷ್ಟ ಆಗಿದೆ. ಕಿರುತೆರೆಯಲ್ಲಿ ಧಾರಾವಾಹಿ ಮಾಡುವಾಗಲೂ ಕೂಡ ರಮಿಕಾ ಶಿವು ಅವರಿಗೆ ಸಾಕಷ್ಟು ಸಿನಿಮಾ ಅವಕಾಶಗಳು ಬರುತ್ತಿದ್ದವು. ಆದರೆ ತಮ್ಮ ಮೊದಲ ಸಿನಿಮಾ ಇದೇ ರೀತಿ ಇರಬೇಕು ಎಂಬ ಕನಸು ರಮಿಕಾಗೆ ಇತ್ತು. ಹಾಗಾಗಿ ಅವರು ಸಾಕಷ್ಟು ಎಚ್ಚರಿಕೆಯಿಂದ ಪ್ರೇಮದ ಊರಲಿ ಚಿತ್ರವನ್ನು ಆಯ್ಕೆ ಮಾಡಿಕೊಂಡರು.