ರಷ್ಯಾದ ನೈಋತ್ಯ ಸೈಬೀರಿಯಾದ (ದಕ್ಷಿಣ ರಷ್ಯಾ) ಕೆಮೆರೊವೊ ಪ್ರದೇಶದಲ್ಲಿ ಇಂದು ರಷ್ಯಾದ An-12 ಸೇನಾ ಸಾರಿಗೆ ವಿಮಾನವೊಂದು ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲಾ 17 ಮಂದಿ ಮೃತಪಟ್ಟಿದ್ದಾರೆ. ಈ ವಿಮಾನವು ಸೈಬೀರಿಯಾದ ನೊವೊಸಿಬಿರ್ಸ್ಕ್ನಿಂದ ಕ್ರಾಸ್ನೊಯಾರ್ಸ್ಕ್ ಕ್ರೈನ ಕಾನ್ಸ್ಕ್ ಕಡೆಗೆ ಪ್ರಯಾಣಿಸುತ್ತಿತ್ತು. ಮಾರ್ಗಮಧ್ಯೆ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೊನೆಯ ಕ್ಷಣದವರೆಗೂ ವಿಮಾನದ ಸಿಬ್ಬಂದಿ ಉರಿಯುತ್ತಿದ್ದ ವಿಮಾನವನ್ನು ಜನವಸತಿ ಕಟ್ಟಡಗಳಿಂದ ದೂರಕ್ಕೆ ತಿರುಗಿಸಲು ಪ್ರಯತ್ನಿಸಿದರು. ಮಾಸ್ಕೋ, ನವೆಂಬರ್ 17: ರಷ್ಯಾದ An-12 ಸೇನಾ ಸಾರಿಗೆ ವಿಮಾನವೊಂದು ಇಂದು ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲಾ 17 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮತ್ತು ರಷ್ಯಾದ ಸರ್ಕಾರಿ ನಿಯಂತ್ರಿತ ಮಾಧ್ಯಮ 'ರೆನ್ ಟಿವಿ' ದೃಢಪಡಿಸಿದೆ.